ರಾಷ್ಟ್ರೀಯ ಸದ್ಭಾವನಾ ದಿನ
Image Credits: Google.com ರಾಷ್ಟ್ರ ಜಾಗೃತಿ ಮೂಡಿಸುವ ಸದ್ಭಾವನೆ ಎಲ್ಲರಿಗೂ ಶಿಸ್ತು ಬದ್ಧತೆ ಕಲಿಸಿದೆ. ಪ್ರತಿಯೊಂದರಲ್ಲಿಯೂ ರಾಷ್ಟ್ರದ ಐಕ್ಯತೆ ಸಾರುವ ಅಂಶಗಳು ಯುವಕರಲ್ಲಿ ದೇಶ ಅಭಿಮಾನ ಹೆಚ್ಚಿಸಲಿದೆ , ಜಾತಿಭೇದವಿಲ್ಲದೆ ನಾವೆಲ್ಲರೂ ಒಂದು ಎನ್ನುವ ಭಾವನೆ ಮೂಡಿಸುತ್ತದೆ. * ರಾಷ್ಟ್ರೀಯ ಭಾವೈಕ್ಯತೆ ದೇಶವೊಂದರ ಜನರಲ್ಲಿ ನಾವು ಎಂಬ ಭಾವನೆ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರುತ್ತಾರೆ. * ರಾಷ್ಟ್ರನಿಷ್ಠೆ ಯು ಇತರ ಎಲ್ಲ ಬಗೆಯ ನಿಷ್ಠೆ ಗಳಿಗಿಂತ ದೊಡ್ಡದು. * ದೇಶ ವಿಭಜಕ ಶಕ್ತಿಗಳು ಮತ್ತು ವಿಚಿದ್ರಕಾರಿ ಶಕ್ತಿಗಳನ್ನು ದೂರೀಕರಿಸುತ್ತದೆ. * ರಾಜಕೀಯ , ಸಾಮಾಜಿಕ , ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಂಶಗಳಿಂದ ಐಕ್ಯತೆಯನ್ನು ಸಾಧಿಸುವುದು. * ಆದರ್ಶಮಯ ಗುರಿಗಳಾದ ಧರ್ಮನಿರಪೇಕ್ಷತೆ ಮತ್ತು ಪ್ರಜಾ ಸತ್ಯಗಳನ್ನು ಸಾಧಿಸುವುದು ರಾಷ್ಟ್ರೀಯ ಭಾವೈಕ್ಯತೆಯ ವಿಶಾಲ ಉದ್ದೇಶವಾಗಿದೆ. ರಾಷ್ಟ್ರೀಯ ಸದ್ಭಾವನಾ ಸವಿನೆನಪಿನಲ್ಲಿ ರಾಜೀವ್ ಗಾಂಧಿಯವರ ಕುರಿತು ಕೆಲವು ಸಂಗತಿಗಳು. ರಾಜೀವ್ ಗಾಂಧಿ ಜನನ ಆಗಸ್ಟ್ 20,1944 ಮುಂಬೈಯಲ್ಲಿ ಜನಿಸುತ್ತಾರೆ , ತಂದೆ ಫಿರೋಜ್ ಷಾ ಗಾಂಧಿ ತಾಯಿ ಇಂದಿರಾಗಾಂಧಿ. ರಾಜೀವ್ ಗಾಂಧಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ . ಇವರು ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದರು ಮತ್ತು ಇವರಿಗೆ ಫೈಲೆಟ್ ಆಗಬೇಕೆಂಬ ಬಯಕೆ ಇ...