Showing posts with label Kavana. Show all posts
Showing posts with label Kavana. Show all posts

ಚೈತನ್ಯ ತುಂಬಿ ಮೋಸ ಮಾಡಿ ಬಿಟ್ಟೆ ಏನೂ...?

 

Image Credit: Google.com

 

ಕಾರ್ಮೋಡದ ಸ್ಪರ್ಶ ದಿಂದ ಇಳೆಗೆ ಸುರಿವ ಮಳೆಯ ಹನಿಯು ನೀನು,

ನಿನ್ನ ಸ್ಪರ್ಶದಿಂದ ಒದ್ದೆಯಾದ ವೃಕ್ಷದ  ಚಿಗುರು ನಾನು,

ಹೆಮ್ಮರದ ಕೊನೆ ಮೂಲೆಯಲ್ಲಿ ಅಡಗಿ ಬದುಕುಳಿಯಲು ಅತೋರಿಯುತ್ತಿದ್ದ ನನಗೆ,

ಮುಂಗಾರಿನ ರೂಪದಲ್ಲಿ ಬಂದು ಚೈತನ್ಯ ತುಂಬಿದವಳು ನೀನು,

ನೀ ನೀಡಿದ ತೃಣ ಭರವಸೆಯಿಂದ ಬೆಳೆಯುತಿದ್ದ ನನಗೆ,

ಸ್ಫೂರ್ತಿ ನೀಡುವ ಸಲುವಾಗಿ ಅರೆಗಳಿಗೆ ಕಾಣಿಸಿ,

ಸುಳಿವೇ ಇಲ್ಲದಂತೆ ಮಾಯವಾಗುತ್ತಿರುವ ನನ್ನ ಕಲ್ಪನೆಯ ಲೋಕದ ಅಪ್ಸರೆ ನೀನು.

ಮನಸ್ಸು ಯೋಚಿಸಿದೆ, ಮಾಯವಾದರೇನು,

ಇಂದು ಇಲ್ಲವೇ ನಾಳೆ ಬರುವಳೆಂದು ನನ್ನ ಹೃದಯದ ಅಭಿಧಮನಿ,

ಅಫಧಮನಿಗಳನ್ನು ಬಿಗಿ ಹಿಡಿದು ಕಾಯುತ್ತಿದೆ ನಾನು,

ಆದರೇ ಅವಳು ಬರುವ ವೇಳೆಗೆ ಸಮಯ ಕೊನೆಯಾಗಿ,

ನನ್ನ ಭರವಸೆಯೇ ನನ್ನನು ಕೊಂದು, ಜೀವ ಬೆಂದು, ದೇಹವು ಮಣ್ಣಲ್ಲಿ ಮಣ್ಣಾಗಿ,

ಆತ್ಮವು ವಾಯುವಿನಲ್ಲಿ ಲೀನವಾಗಿ ಅಲೆದಾಡುತ್ತಿದೆ ಅವಳಿಗಾಗಿ ಇಂದು.

 .... ಕಾಯುವಿಕೆಯ ಕೊನೆ ಕ್ಷಣಗಳು. 

 

ಹಸೇನ್. ಎಂ, ದ್ವಿತೀಯ  ಬಿ ಎ, ವಿದ್ಯಾರ್ಥಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ 

 

                    

ಪ್ರೀತಿಯ ತೋರಣ

 

 

Image Credit: Google.com

ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ,

ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ,

ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ, 

ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ.

 

ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ,

ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ,

ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ,

ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ.

 

ಪ್ರೀತಿ ಮಳೆಯ ಲಯವಾಗಲಿ,

ಶಮನಗೊಳಿಸುವುದು ನಮ್ಮಯ ನೋವನು ಆಳದಲಿ,

ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ,

ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ.

 

ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ

ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ

ತಾಳ್ಮೆ, ದಯೆ ಮತ್ತು ಅಂತ್ಯವು ನೀನಾಗಿರಲಿ,

ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ.

 

ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ,

ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ,

ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ,

ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ......! 

 

ಮಂಜುನಾಥ್. ಎಸ್

ಸಹಾಯಕ ಪ್ರಾಧ್ಯಾಪಕರು, ಮನೋವಿಜ್ಞಾನ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ