ಅಪರಿಚಯ
Image credit: alamy.com
ಯಾರೋ ಎಲ್ಲೋ ಸಿಕ್ಕವರಿಗೆ
ಅವಶ್ಯಕತೆ ಗೂ ಮೀರಿ sorry, thank you, please ಎಂದಿದ್ದೇನೆ,
ಆದರೆ ನಿನ್ನೊಂದಿಗೆ ಏಕೋ ನನ್ನ ಅಹಂಕಾರ ಬಾಯಿ ಕಟ್ಟಿ ಹಾಕುತ್ತದೆ.
ಯಾರದೋ ಹಾಡು,ಕವನ, ಸಂದೇಶ, ನೃತ್ಯ, ಛಾಯಾಚಿತ್ರಕ್ಕೆ
ಹೆಬ್ಬೆರಳು ನೋಯುವಷ್ಟು likes ಒತ್ತಿದ್ದೇನೆ,
ಅದು ಯಾಕೋ ನಿನ್ನ ಪ್ರತಿಭೆಗೆ ಚಪ್ಪಾಳೆ ತಟ್ಟಲು ಕೈ ಕಟ್ಟಿ ಹಾಕಿದಂತಾಗುತ್ತದೆ.
ಯಾರದೋ ಸಾವಿಗೆ ಶೋಕ ಸೂಚಿಸಿ
ನೂರಾರು ಮಾನಸಿಕ ಸ್ವಾಸ್ಥ್ಯದ ಕುರಿತು ಪೋಸ್ಟ್ ಹಾಕಿದ್ದೇನೆ,
ಅದು ಯಾಕೋ ಪಕ್ಕದಲ್ಲೇ ಸಾಯುತ್ತಿರುವ
ನಿನ್ನೆಡೆಗೆ ನೋಡಲು ಕಣ್ಣು ಕುರುಡಾಗಿ ಹೋಗುತ್ತದೆ.
ಯಾರದೋ ಹತ್ತಿರ ನಿನ್ನ ಬಗ್ಗೆ
ಅದೆಷ್ಟೋ ಚಾಡಿ ಮಾತು ಹೇಳಿದ್ದೇನೆ,
ಅದು ಯಾಕೋ ಒಮ್ಮೆಯೂ ನಿನ್ನ ಎದುರು ನಿಂತು
ಹೇಳಲು ಧೈರ್ಯವೇ ಬರಲಿಲ್ಲ.
ಯಾರದೋ ಹತ್ತಿರ ಬಿಕ್ಕಿ ಬಿಕ್ಕಿ ಅತ್ತು
ಸಮಾಧಾನ ಹುಡುಕಿದ್ದೇನೆ,
ಅದು ಯಾಕೋ ನಿನ್ನ ಪಕ್ಕಕುಳಿತು ಮಾತನಾಡಲು
ನನಗೆ ಸಮಯವೇ ಇಲ್ಲವಾಯಿತು.
ಅದೆಷ್ಟೋ ಮೈಲಿ ದೂರದಲ್ಲಿರುವ
ಅದು ಯಾರಿಗೂ "How are you?" ಎಂದು ಕೇಳಿದ್ದೇನೆ,
ಮೈ ಗೆ ಮೈ ತಾಕುವ ಹತ್ತಿರವಿದ್ದು
ನಿನ್ನ ಕೇಳುವ ಅಗತ್ಯ ಇದೆ ಎಂದು ಅನಿಸಲೇ ಇಲ್ಲ.
ಯಾರದೋ ಸಂತೋಷವನ್ನು ನೋಡಿ
ನಂಗೂ ಅದು ಬೇಕು ಎಂದು ಬಯಸಿದ್ದೇನೆ,
ಅದು ಯಾಕೋ ಪಕ್ಕದಲ್ಲೇ ಇರುವ
ನಿನ್ನ ನೋಡಲು ಮನಸ್ಸು ಒಪ್ಪಲೇ ಇಲ್ಲ.
ಕಡೆಯದಾಗಿ ಯಾಕೋ ಹೀಗನಿಸುತ್ತಿದೆ
"ನಾವು ಅಪರಿಚಿತರಾಗಿದ್ದರೇ ಒಳ್ಳೆಯದಿತ್ತೇನೋ",
ಹೀಗೊಮ್ಮೆ ಸಿಕ್ಕಾಗ ನೀನಲ್ಲದಿದ್ದರೂ
ನಿನ್ನ ನಗುವಾದರೂ ಸಿಗುತ್ತಿತ್ತೇನೋ.
ಅನನ್ಯ ಸುಮಾ
I year M Sc Clinical Psychology
Kateel Ashok Pai Memorial Institute of Allied Health Sciences, Shivamogga
👍
ReplyDelete