Posts

Showing posts with the label Nature

ಪ್ರೀತಿಯ ತೋರಣ

Image
    ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ , ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ , ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ ,   ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ .   ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ , ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ , ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ , ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ .   ಪ್ರೀತಿ ಮಳೆಯ ಲಯವಾಗಲಿ , ಶಮನಗೊಳಿಸುವುದು ನಮ್ಮಯ ನೋವನು ಆಳದಲಿ , ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ , ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ .   ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ ತಾಳ್ಮೆ , ದಯೆ ಮತ್ತು ಅಂತ್ಯವು ನೀನಾಗಿರಲಿ , ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ .   ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ , ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ , ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ , ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ ......!    ಮಂಜುನಾಥ್.   ಎಸ್ ಸಹಾಯಕ ಪ್ರಾಧ್ಯಾಪಕರು , ಮನೋವಿಜ...

ನೀನು…

Image
ಚಿತ್ರಕೃಪೆ : ಆರ್ವಿ  ನೀನು… ನೆನಪಿದ್ದರು ಮರೆಯುವೆನು ನಿನ್ನನ್ನು ಮರೆತಿರುವ ನೆನಪುಗಳೇ ನೆನಪಿಸುತ್ತಿವೆ ನಿನ್ನನ್ನು ನನ್ನ ಮನಸ್ಸೆಂಬ ಮಾಯಾಲೋಕದಲ್ಲಿ ಮಾಯೆಯಂತೆ ಬರುವ ಮಾಯಾವಿ ನೀನು ನೆನಪೆಂಬ ದೋಣಿಯಲ್ಲಿ ಸಾಗಿ ಬರುವ ನೀನು ನಾವಿಕನಾಗಿ ದಡ ಸೇರುವ ಮುನ್ನ ನೆನಪುಗಳ ಅಲೆಗಳಿಂದ ಮರೆಯಾಗುವನು ನೀನು ಕಣ್ಮರೆಯಾಗಿ ಕಣ್ಣ ಮುಂದೆ ಬಂದ ನೀನು. ಮುಂಗಾರಿನ ಹಿಂಗಾರದಂತೆ ಬರುವ ನೀನು ಹಿಂಗಾರ ಹಸಿರಾಗುವ ಮುನ್ನ ಕಳಚಿದಂತೆ ಉದುರುವ ಸಿಂಗಾರ ನೀನು ಹಿಂಗಾರ ಸಿಂಗಾರವಾಗುವ ಮುನ್ನ ಕೈತಪ್ಪಿದ ನೀನು. ಭಾವನೆಗಳ ಭಾಗವಾಗಿರುವ ನೀನು ಸ್ಮೃತಿಯಲ್ಲಿ ನೀನೋ, ಸ್ತುತಿಯಲ್ಲಿ ನೀನೊ ನನ್ನಲ್ಲಿ ನೆಲೆ ನಿಂತಿರುವ ನೀನು  ಸ್ಮೃತಿಯಲ್ಲಿರುವ ಸ್ತುತಿಯ ಭಾವವೇ ನೀನು. ನೀನು ನೀನು ನೀನು, ಯಾರು ಈ ನೀನು? ನಾನೇ ತಲುಪಬೇಕಿದೆ, ನಾನರಿಯದಾದ ನಿನ್ನನ್ನು!!!!!!                ---ಆರ್ವಿ---  ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ,  ಶಿವಮೊಗ್ಗ