ನೀನು…
![]() |
ಚಿತ್ರಕೃಪೆ : ಆರ್ವಿ |
ನೀನು…
ನೆನಪಿದ್ದರು ಮರೆಯುವೆನು ನಿನ್ನನ್ನು
ಮರೆತಿರುವ ನೆನಪುಗಳೇ ನೆನಪಿಸುತ್ತಿವೆ ನಿನ್ನನ್ನು
ನನ್ನ ಮನಸ್ಸೆಂಬ ಮಾಯಾಲೋಕದಲ್ಲಿ
ಮಾಯೆಯಂತೆ ಬರುವ ಮಾಯಾವಿ ನೀನು
ನೆನಪೆಂಬ ದೋಣಿಯಲ್ಲಿ ಸಾಗಿ ಬರುವ ನೀನು
ನಾವಿಕನಾಗಿ ದಡ ಸೇರುವ ಮುನ್ನ ನೆನಪುಗಳ
ಅಲೆಗಳಿಂದ ಮರೆಯಾಗುವನು ನೀನು
ಕಣ್ಮರೆಯಾಗಿ ಕಣ್ಣ ಮುಂದೆ ಬಂದ ನೀನು.
ಮುಂಗಾರಿನ ಹಿಂಗಾರದಂತೆ ಬರುವ ನೀನು
ಹಿಂಗಾರ ಹಸಿರಾಗುವ ಮುನ್ನ ಕಳಚಿದಂತೆ
ಉದುರುವ ಸಿಂಗಾರ ನೀನು
ಹಿಂಗಾರ ಸಿಂಗಾರವಾಗುವ ಮುನ್ನ ಕೈತಪ್ಪಿದ ನೀನು.
ಭಾವನೆಗಳ ಭಾಗವಾಗಿರುವ ನೀನು
ಸ್ಮೃತಿಯಲ್ಲಿ ನೀನೋ, ಸ್ತುತಿಯಲ್ಲಿ ನೀನೊ
ನನ್ನಲ್ಲಿ ನೆಲೆ ನಿಂತಿರುವ ನೀನು
ಸ್ಮೃತಿಯಲ್ಲಿರುವ ಸ್ತುತಿಯ ಭಾವವೇ ನೀನು.
ನೀನು ನೀನು ನೀನು, ಯಾರು ಈ ನೀನು?
ನಾನೇ ತಲುಪಬೇಕಿದೆ, ನಾನರಿಯದಾದ ನಿನ್ನನ್ನು!!!!!!
---ಆರ್ವಿ---
ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ, ಶಿವಮೊಗ್ಗ
Comments
Post a Comment