ದೈವತ್ವದ ಸಾಕಾರಮೂರ್ತಿ : ಅಮ್ಮ
ಅಯ್ಯೋ... ರಾಮ ಗಂಟೆ 8 ಆಯ್ತಲ್ಲಾ, ಸೋಂಬೇರಿ, ..ಸೋಂಬೇರಿ ಇನ್ನೂ ಮಲಗಿದಿಯಲ್ಲೇ, ಇಷ್ಟೋತ್ತ್ ಮಲುಗೋದ ಬಲಗಡೆ ಎದ್ದು ದೇವ್ರೇಗೇ ನಮಸ್ಕಾರ ಮಾಡು ಎನ್ನುತಲೆಯೇ ಅಮ್ಮನ ಬೆಳಗಿನ ಸುಪ್ರಭಾತವು ಶುರುವಾಗುತ್ತೇ.
ಅಯ್ಯೋ ಸಾಕು ನೀಲ್ಸೂ ಏನ್ ಬೆಳ್ಗೆ ಬೆಳ್ಗೆನೇ ಶುರು ಮಡ್ಕೊಂಡ ಫಸ್ಟು ನೀನ್ ಮಗನಿಗೆ ಎಳ್ಸು ಅಂತಾನೇ ಮುಖ ದಪ್ಪ ಮಾಡಿಕೊಂಡು ಅಮ್ಮ ಮತ್ತು ಅಣ್ಣನನ್ನು ಶಪಿಸುತ ನನ್ನ ಬೆಳಗಿನ ಮುದ್ದಾದ ದಿನಗಳ ಪ್ರಾರಂಭ. ಎದ್ದೋಳೇ ಅಡುಗೆ ಮನೆಕಡೆಗೆ ಟೀ ಕುಡಿಯೋಣ ಅಂತ ಹೋದ್ರು ನಮ್ಮ ಅಮ್ಮನ ಬೈಗುಳ ಇನ್ನೂ ಮೂಗ್ದೇ ಇರೋಲ್ಲ ಅದ್ರಲ್ಲೂ ನನ್ನ ಪರವಾಗಿ ಮಾತಾಡೋಕೆ ಅಂತಾನೆ ನನ್ನ ಪ್ರೀತಿಯ ಅಪ್ಪ....ಶೇವಿಂಗ್ ಮಾಡಿಕೊಳ್ಳುತ್ತಾ ಲೇ ಇವ್ಳೇ ಸಾಕು ಕಣೇ ಎಷ್ಟೇ ಬೈತ್ತೀಯ , ಏನೋ ಭಾನುವಾರ ಒಂದ್ ದಿನ ಲೇಟಾಗಿ ಎದ್ದೀದಕ್ಕೆ ಬೈಯೋದ ಇರ್ಲಿ ಬೀಡು ಅಂತ ಅಪ್ಪ ನನ್ನ ಇನ್ನು ಮುದ್ದು ಮಾಡುತ್ತಾ ಅಟ್ಟದ ಮೇಲೆ ಕೂರಿಸುತ್ತಾರೆ, ನಾನು ಸಹ ಅದಿಕ್ಕೆ ಅಪ್ಪ ಹೇಳಿದ್ದು ಕೇಳ್ತಾ ಶಾಂತಿ ಎನ್ನುತ ಅಮ್ಮನನ್ನು ಇನ್ನೂ ಗೋಳೂಯ್ಯುಸುತ್ತೀದ್ದೇ.
ರೀ ಸಾಕು ನನ್ನ ಮೇಲೆ ಯಾಕೆ ರೆಗಡ್ತೀರ ಇಬ್ಬರು ನನ್ನ ಮಕ್ಕಳೇ, ನಾನು ಇಬ್ಬರನ್ನು ಯಾವಾಗ್ಲೂ ಬೇರೆ ಮಾಡಿ ನೋಡಿಲ್ಲ ಎನ್ನುತ್ತಾ ನನ್ನ ಮಾತುಗಳಿಂದ ನೊಂದ ಅಮ್ಮ ತಲೆಬಾಗಿಸಿಕೊಂಡು ಪಾತ್ರೆಗಳ ಶಬ್ದ ಮಾಡ್ತಿದ್ರು, ಆಗ ಓ ಅಮ್ಮನಿಗೆ ಬೇಜಾರ್ ಅಯ್ತಲ್ಲ ಛೇ...... ಲೇ ಅಮ್ಮ ಬೇಜಾರ್ ಆಗ್ಬೇಡ ಕಣೇ ತಪ್ಪಾಯ್ತು ನನ್ನ ಮುದ್ದು ಅಲ್ವ ನೀನು ಎನ್ನುವ ಸಮಾಧಾನದ ಮಾತು.
ಅದ್ರಲ್ಲೂ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಬಂದ್ರೆ ಸಾಕು ಗೊತ್ತಲ್ಲ , ರೀ.... ನೋಡ್ರಿ ನೀವು ಕೊಟ್ಟಿರೋ ಸಲಿಗೆ ಜಾಸ್ತಿ ಆಯ್ತು ಅದಿಕ್ಕೆ ನಿಮ್ಮ ಮಗಳು ತಾಗೊಂಡಿರೋ ಮಾರ್ಕ್ಸ್ ನ ವಸಿ ನೋಡಿ ಅಂತ ಬೈದು, ನನ್ನ ಟಿವಿ, ಮೊಬೈಲ್ ನಿಂದ ಅಗಲಿಸಿ ಬಿಡುತ್ತಿದ್ದಳು.
ನಾವು ಬೇಸರಗೊಂಡೇವು ಎಂದು ತಿಳಿದೊಡನೆ ನನಗಿಷ್ಟವಾದ ತಿನಿಸುಗಳನ್ನು ಮಾಡಿ ಮುಂದೆ ತಂದಿಟ್ಟು ಸಮಾಧಾನ ಮಾಡಿಸುತ್ತಾಳೆ. ಸಮಾಧಾನ ಮಾಡಿಸಿದಾಗ ಸಮಾಧಾನವಾಗಲಿಲ್ಲ ಎಂದರೆ ಹಾಗೆಯೇ ಬಗ್ಗು ಬಡಿಯುತ್ತಾಳೆ. ಸಿಟ್ಟು ತಾಳ್ಮೆ ಇವುಗಳ ನಡುವೆ ಸಂಸಾರದ ಹೊರೆಯನ್ನು ಹೊತ್ತು ಮಕ್ಕಳು ಪ್ರಪಂಚವನ್ನೇ ತಿರುಗುವ ಕನಸುಗಳನ್ನು ಕಾಣುತ್ತಾಳೆ.
ನನಗೆ ಇನ್ನೂ ನೆನಪಿದೆ ಆಗ ನಾನು 2ನೇ ತರಗತಿ ಅಣ್ಣ ಆರನೇ ತರಗತಿ ಇಬ್ಬರೂ ಸೇರಿಕೊಂಡು ದೇವರ ಹುಂಡಿಯಲ್ಲಿ ಇರುವ ಹಣವನ್ನು ಕದ್ದು ಅಂಗಡಿಗೆ ಹೋಗಿ ಬೇಕಾದಷ್ಟು ತಿನಿಸುಗಳನ್ನು ತೆಗೆದುಕೊಂಡು ತಿಂದೆವು ಆದರೆ ಅಂಗಡಿಯ ಮಾಲಿಕ ಅಮ್ಮನ ಬಳಿ ಹಾಕಿ ಕೊಟ್ಟುಬಿಟ್ಟರು. ಅಮ್ಮ ಸರಸರನೆ ಮನೆಗೆ ಬಂದರು ನಾನು ಅಣ್ಣ ಒಲೆಯ ಮುಂದೆ ಚಳಿ ಕಾಯಿಸುತ್ತಾ ಕೂತಿದ್ದೆವು. ಅಮ್ಮ ಬಂದೊಡನೆ ಉರಿಯುತ್ತಿದ್ದ ಬೆಂಕಿಯ ಕೋಲನ್ನು ತೆಗೆದು ಇಬ್ಬರು ಮುಂದೆ ಕೈಚಾಚಿ ಎಂದು ಅಬ್ಬರಿಸಿದರು ಇನ್ನು ಮುಂದೆ ದುಡ್ಡು ತೆಗೀತೀರಾ, ದೇವರ ಕೋಣೆ ಕಡೆ ಹೋಗ್ತೀರಾ ಎಂದು ಗದರಿಸಿದಳು ಬೆಂಕಿ ಕಂಡೊಡನೆ ನಾನಲ್ಲ ಅಣ್ಣ ,ಅಣ್ಣ ಅಲ್ಲ ನಾನು ಎಂದು ಇಬ್ಬರು ತಪ್ಪುಗಳನ್ನು ಒಬ್ಬರ ಮೇಲೆ ಒಬ್ಬರು ವಾದಿಸತೊಡಗಿದೇವು. ಅದೇ ಮೊದಲು ಅದೇ ಕೊನೆ ಅಂತಹ ಮಹಾಕಾರ್ಯದ ಕೆಲಸ ಜೀವನದಲ್ಲಿ ಮುಂದೆದು ಮಾಡೋದಿಲ್ಲ..
ಕೆಲವೊಮ್ಮೆ ಇಲ್ಲ ಸಲ್ಲದ ವಿಚಾರಗಳಿಗೆ ಅಮ್ಮನ ಮೇಲೆ ರೇಗೊದುಂಟು….
ಈ ರೀತಿಯಲ್ಲಿ ನಾವು ಅಮ್ಮನನ್ನು ಎಷ್ಟೇ ರೇಗಿಸಿ, ಪೇಚಾಡಿಸಿದರೂ ದಿನ ದಿನ ನಮ್ಮ ಆರೈಕೆ , ಸಣ್ಣ ಪುಟ್ಟ ತಪ್ಪುಗಳನ್ನ ಗುರುತಿಸಿ ಬೈದು ಬುದ್ಧಿ ಹೇಳುತ್ತಾ, ದಿನ ನಿತ್ಯದ ಇಂಪಾದ ಅಮ್ಮನ ಸುಪ್ರಭಾತ (ಬೈಗುಳ), ಕೇಳಿಸಿಕೊಂಡು ಬೆಳೆದ ನಾನು ಅದರಲ್ಲೂ ಅಣ್ಣನಿಗಿಂತ ಒಂದು ಪಟ್ಟು ಹೆಚ್ಚಾಗಿ ಪ್ರೀತಿ ನೀಡಿ, ನಮ್ಮ ಕನಸು ಸ್ವಂತಿಕೆಗಾಗಿ ತನ್ನ ಕನಸನ್ನು ಮರೆಮಾಚಿಕೊಂಡು ನಾವು ಸಾಧಿಸಲಿ ಅಥವಾ ಸೋಲಲಿ ಅದಕ್ಕೆ ಜೀವಂತಿಕೆಯನ್ನು ತುಂಬುತ್ತ, ಎಷ್ಟೇ ತಪ್ಪು ಮಾಡಿದರು ನಾವು ಬೆಳೆದು ದೊಡ್ಡವರಾಗಿ ನಾವು ಅವಳನ್ನು ಯಾವುದೇ ಪರಿಸ್ಥಿತಿಗೆ ತಳ್ಳಿದರು "ಮೂಲೆಯೊಂದರಲ್ಲಿ ಕೂತು ಅದೇ ನಮ್ಮ ಬಾಲ್ಯದ ತುಂಟತನವನ್ನು ನೆನಪಿಸಿಕೊಂಡು ನಸು ನಗುತ್ತಾ ಮಕ್ಕಳ ಭವಿಷ್ಯ ಚನ್ನಾಗಿರಲೆಂದು ಎರಡೂ ಕೈಯತ್ತೀ ಹಾರೈಸುವ ಆ ದೈವತ್ವದ ಸಾಕಾರ ಮೂರ್ತಿಯನ್ನು ಪುಟ್ಟ ಲೇಖನದಲ್ಲಿ ಕಟ್ಟಿ ಹಾಕೋಕೆ ಸಾಧ್ಯನ....?"
ನನ್ನ ಪ್ರೀತಿಯ ಮಾತೃವೇ ಎಂದೆಂದೂ ನಿನ್ನ ಬಾಳು ಹಸಿರಾಗಿರಲಿ.....
ಅನುರಾಧ ವಿ
ದ್ವಿತೀಯ ಬಿ ಎ ವಿಧ್ಯಾರ್ಥಿನಿ
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Good write up...very good expression Anuradha. Keep it up
ReplyDelete