ರಾಷ್ಟ್ರೀಯ ಸದ್ಭಾವನಾ ದಿನ
*ರಾಷ್ಟ್ರೀಯ ಭಾವೈಕ್ಯತೆ ದೇಶವೊಂದರ ಜನರಲ್ಲಿ ನಾವು ಎಂಬ
ಭಾವನೆ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರುತ್ತಾರೆ.
*ರಾಷ್ಟ್ರನಿಷ್ಠೆ ಯು ಇತರ ಎಲ್ಲ ಬಗೆಯ ನಿಷ್ಠೆ ಗಳಿಗಿಂತ
ದೊಡ್ಡದು.
*ದೇಶ ವಿಭಜಕ ಶಕ್ತಿಗಳು ಮತ್ತು ವಿಚಿದ್ರಕಾರಿ
ಶಕ್ತಿಗಳನ್ನು ದೂರೀಕರಿಸುತ್ತದೆ.
*ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಂಶಗಳಿಂದ ಐಕ್ಯತೆಯನ್ನು
ಸಾಧಿಸುವುದು.
*ಆದರ್ಶಮಯ ಗುರಿಗಳಾದ ಧರ್ಮನಿರಪೇಕ್ಷತೆ ಮತ್ತು ಪ್ರಜಾ
ಸತ್ಯಗಳನ್ನು ಸಾಧಿಸುವುದು ರಾಷ್ಟ್ರೀಯ ಭಾವೈಕ್ಯತೆಯ ವಿಶಾಲ ಉದ್ದೇಶವಾಗಿದೆ.
ರಾಷ್ಟ್ರೀಯ ಸದ್ಭಾವನಾ ಸವಿನೆನಪಿನಲ್ಲಿ ರಾಜೀವ್ ಗಾಂಧಿಯವರ ಕುರಿತು ಕೆಲವು ಸಂಗತಿಗಳು.
ರಾಜೀವ್ ಗಾಂಧಿ ಜನನ ಆಗಸ್ಟ್ 20,1944 ಮುಂಬೈಯಲ್ಲಿ ಜನಿಸುತ್ತಾರೆ, ತಂದೆ ಫಿರೋಜ್ ಷಾ ಗಾಂಧಿ ತಾಯಿ ಇಂದಿರಾಗಾಂಧಿ. ರಾಜೀವ್
ಗಾಂಧಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ . ಇವರು ಮೆಕಾನಿಕಲ್ ಇಂಜಿನಿಯರಿಂಗ್
ವಿದ್ಯಾಭ್ಯಾಸ ಮುಗಿಸಿದರು ಮತ್ತು ಇವರಿಗೆ ಫೈಲೆಟ್ ಆಗಬೇಕೆಂಬ ಬಯಕೆ ಇತ್ತು ಆದರೆ ಅವರ ಆಸೆ
ಈಡೇರಲಿಲ್ಲ ಕಾರಣ ಅವರ ಸೋದರ ಸಂಜಯ್ ಗಾಂಧಿ ಜೂನ್ 23 , 1980 ರಂದು ವಿಮಾನ ಅಪಘಾತದಲ್ಲಿ ನಿಧನರಾದರು ಆದ್ದರಿಂದ ತಾತ್ಕಾಲಿಕವಾಗಿ ರಾಜಕೀಯಕ್ಕೆ
ಧುಮುಕಿದರು, ಅಮೇಥಿ ಕ್ಷೇತ್ರದಿಂದ 2 ಲಕ್ಷ ಮತಗಳಿಂದ ಶರತ್ ಪವರ್ ವಿರುದ್ಧ ಜಯಗಳಿಸಿದರು.
ಭಾರತದ ಆರನೇ ಪ್ರಧಾನಮಂತ್ರಿಯಾಗಿ 1984 ರಿಂದ 89
ರವರೆಗೆ ಸೇವೆ ಸಲ್ಲಿಸಿದರು, ಇವರು ಶ್ರೀಲಂಕದ ಎಲ್ ಟಿ ಟಿ ಇ ಸಮಸ್ಯೆ ನಿಗ್ರಹ
ಗೋಸ್ಕರ ಶ್ರೀಲಂಕಾಕ್ಕೆ ಭಾರತದ ಭಾರತದ ಶಾಂತಿಪಾಲನಾ ಪಡೆಯನ್ನು (ಇಂಡಿಯನ್ ಪೀಸ್ ಕೀಪಿಂಗ್ ಫೋ)
ನೇಮಿಸಲಾಯಿತು. ಪರಿಣಾಮವಾಗಿ ಅವರು ತಮ್ಮ ಜೀವನವನ್ನು ತೇತ್ತ ಬೇಕಾಯಿತು. ತಮಿಳುನಾಡಿನ ಪೇರಂ
ಬಂದೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ ಶ್ರೀಲಂಕದ LTTE (ಲೀಬ್ರೇಶನ್ ಟೈಗರ್ಸ್ ಆಫ್ ತಮಿಳು ಈಳಂ), ಮಾನವ ಬಾಂಬ್ ದಾಳಿಗೆ ಮೇ 21, 1991 ರಂದು ತುತ್ತಾದರು. 1991 ರಲ್ಲಿ ಭಾರತ ಸರಕಾರ ಮರಣಾನಂತರ ರಾಜೀವ್ ಗಾಂಧಿಯವರಿಗೆ
ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಡಿ ದೇವರಾಜ ಅರಸು...
ಡಿ ದೇವರಾಜ ಅರಸು ಅವರು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 1915 ಆಗಸ್ಟ್ 20ರಂದು ಜನಸಿದ್ದ ಅರಸು ಮೈಸೂರು ಒಡೆಯರ ವಂಶಸ್ಥರು. ಮೈಸೂರು ಭಾಗದ ಜನರು ಅರಸು ಅವರನ್ನು ಪ್ರೀತಿಯಿಂದ ಬುದ್ಧಿ ಎಂದು ಕರೆದಿದ್ದರು. ಅರಸು ಅವರು 1952 ರಿಂದ 80ರ ತನಕ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು ಇವರನ್ನು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಇವರನ್ನು ಪರಿಶಿಷ್ಟ ಜಾತಿ ಹಿಂದುಳಿದ ವರ್ಗಗಳ ಹರಿಕಾರರೆಂದು ಕರೆಯುತ್ತಾರೆ.
ಇವರು ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಎಲ್ ಜಿ ಹಾವನೂರು ಆಯೋಗ ಸ್ಥಾಪಿಸಿದರು. ಬಡವರು ಇನ್ನೊಬ್ಬರ ಋಣದಲ್ಲಿ ಇರಬಾರದೆಂದು ಹೇಳಿ ಋಣಭಾರ ಕಾಯ್ದೆಯನ್ನು ಜಾರಿಗೆ ತಂದರು, ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ವಸತಿ ನಿಲಯಗಳನ್ನು ಸ್ಥಾಪನೆ ಮಾಡಿದರು. 06 ಜೂನ್ 1982 ರಂದು ನಿಧನರಾದರು.
ರಾಜು ಇಂಗಳಗಿ
ಪ್ರಥಮ ಬಿ ಎ ವಿದ್ಯಾರ್ಥಿ
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Good Raju...keep writing
ReplyDelete