ಅಂಕೆಯಿಲ್ಲದ ಲಂಕೇಶನ ಕದಡಿದ ಮನಸು
ನೀನಾಸಂ ನಮ್ಮ ಕೈ ಗಿತ್ತ ಬ್ಯಾಗ್ ನಲ್ಲಿದ್ದ ಎಲ್ಲವನ್ನು ನೋಡುತ್ತಾ ಬಂದ ನಮಗೆ ಸಿಕ್ಕಿದ್ದೆ " ದಶಾನನ ಸ್ವಪ್ನ ಸಿದ್ಧಿ " ಎಂಬ ಶೀರ್ಷಿಕೆಯ ಹಸ್ತಪ್ರತಿ (ಭ್ರೋಚರ್) . ದಶಾನನ ಸ್ವಪ್ನಿಸಿದ್ದಿ ಕುವೆಂಪು ರಚಿತಾ ರಾಮಾಯಣ ದರ್ಶನ೦ ಕೃತಿಯಿಂದ ಆಯ್ದ ರಂಗ ಪ್ರಯೋಗ . ಅದನ್ನು ನೋಡಿದ ನಮ್ಮ ಮೊದಲ ಅನಿಸಿಕೆ " ಅದು ಸರಳ ರಗಳೆಯಲ್ಲಿರುವ ಕೃತಿ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ !! ಎಂದು . ಆದರೆ ಅದರ ರಂಗ ಪ್ರಯೋಗವನ್ನು ನೋಡುತ್ತಾ ಹೋದ ನಮಗೆ ಕೊನೆಗೆ ಆದ ಅನುಭವವೇ ಬೇರೆ !!. ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ . ಮಹಾಕಾವ್ಯಗಳ ರಚನೆಯ ಯುಗ ಮುಗಿದೆ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ " ಶ್ರೀ ರಾಮಾಯಣ ದರ್ಶನ 0". ಕುವೆಂಪುರವರ ಕಿರೀಟಕ್ಕೆ ಜ್ಞಾನಪೀಠವೆಂಬ ವಜ್ರವನ್ನು ಕೊಟ್ಟ ಕೃತಿ ಇದು . " ದಶಾನನ ಸ್ವಪ್ನ ಸಿದ್ಧಿ " ಇಲ್ಲಿ ರಾವಣನು ನಮಗೆ ತೋರುವ ಬಗ್ಗೆ ಅದ್ಭುತ . ಅವನ ಮನಸ್ಸಿನ ಲಾಗುವ ವಿಭಿನ್ನ ಮಾರ್ಪಾಡುಗಳನ್ನು ಜಗದ ಮುಂದೆ ಇಡುವ ಪ್ರಯತ್ನ ಕವಿಯದ್ದಾದರೆ ಅದನ್ನು ರಂಗ ಪ್ರಯೋಗ ಮಾಡಿ ಎಲ್ಲರ ಕಣ್ಣುಗಳಿಗೆ ಕಟ್ಟುವಂತೆ ಮಾಡಿದ್ದು ನಿರ್ದೇಶಕರಾದ ಮಂಜು ಕೊಡಗು , ಮತ್ತು ತಂಡ . ಕಥೆ ಹೀಗಿದೆ : ರಾಮನ ಸೈನ್ಯವು ಲಂಕಾಧಿನಾಥನ...