Friday, October 2, 2020

ಗಾಂಧೀ ತಾತಾ

 

Image Credit : Google.com

ಮಕ್ಕಳತಾತಾ ಹರಿಗಿರಿಜನ ಪಿತಾ
ಧರೆಯೊಳು ಸಾರಿದ ಭಗವದ್ಗೀತಾ
ಉತ್ತಮ ಭಾರತ ಕುಲ ಸಂಭೂತಾ
ಸುಜನ ಪೂಜಿತಾ ಗಾಂಧೀ ತಾತಾ

ಸ್ವಾತಂತ್ರ್ಯ ಸಾರಿದ ಸ್ಪೂರ್ತಿಯ ತಾತಾ
ಎಲ್ಲರ ಮನದಲ್ಲೂ ನೆಲೆಸಿದ ತಾತಾ
ಸೆರೆಮನೆ ಹೊಕ್ಕರು ಸಂತೋಷದಾತಾ
ಕಳೆದನು ದಿನಗಳ ಗಾಂಧೀ ತಾತಾ

ಉಪವಾಸವನು ಆಚರಿಸಿದಾತಾ...
ಜಗ್ಗದ ಬ್ರಿಟೀಷರ ಬಗ್ಗಿಸಿದಾತಾ..
ಎಲ್ಲ ಜನಾಂಗವ ಜಯಿಸಿದ ತಾತಾ
ತಂದ ಸ್ವತಂತ್ರವ ಗಾಂಧೀ ತಾತಾ

ಸತ್ಯ ಅಹಿಂಸೆ ಗಾಂಧೀಯ ತತ್ವಾ
ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಾತಾ
ತಾರಕ ಮಂತ್ರವ ಜಪಿಸುತ ತಾತ


ಎಡಗೈಯಲಿ ಚರಕ ಹಿಡಿದು ಕುಂತವ
ಬಲಗೈಯಲಿ ಕೋಲು ಹಿಡಿದು ನಿಂತವ
ಭರತಖಂಡ ರಾಮರಾಜ್ಯ
ಕನಸು ಕಂಡವ ಗಾಂಧಿ ತಾತ

ಅಕ್ಟೋಬರ್ 2ರಂದು ಜನಿಸಿದ ಕಂದ
ಇಂದು ಆಚರಿಸುವುದು ರಾಷ್ಟ್ರೀಯ ಹಬ್ಬ ಎಂದು
ಸತ್ಯ ಮತ್ತು ಹಿಂಸೆಯ ತತ್ವ ಇವರದು
ಕಾಲಕಾಲಕ್ಕೆ ಉಪವಾಸ ಸತ್ಯಾಗ್ರಹ ಕೈಗೊಂಡವರು

ಕೋಲು ಹಿಡಿದು ಮುಂದೆ ಸಾಗಿದರೆ
ಹಿಂಡು ಹಿಂದೆ  ಸಾಗರದಂತೆ ಜನರು
ಸರ್ವರಿಗೂ ಸಿಗಲಿ ಸ್ವಾತಂತ್ರ್ಯೆಂದು
ಧ್ವನಿ ಎತ್ತಿದ ನಾಯಕ ಗಾಂಧಿ ತಾತ

ಭಾರತಾಂಬೆಯ ಕೀರ್ತಿ ಬೆಳಗಿಸಿದ ಶಾಂತಿ ದೂತ
ಗೋಡ್ಸೆ ಗುಂಡಿಗೆ ತಾತ ಅಮರನಾದ ಮಹಾತ್ಮ
ಅಂದು ಇಂದು ಮುಂದೆಂದಿಗೂ ಆರದೆ ಇರುವ ಜ್ಯೋತಿ

ಸಂಗೀತ ಪಾಟೀಲ್ ✍️
ಪ್ರಥಮ ಬಿ ಎ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

2 comments: