ಬಣ್ಣದ ಬದುಕಿನ ಪರಪಂಚ


    Image credit: Shashikant Dhotre

  

ಒಂಭತ್ತು ತಿಂಗಳ ನಿನ್ನ ಗರ್ಭದಲ್ಲಿ ಕಥೆ ಕವನಗಳ ಆಲಿಸುವಿಕೆಯಲ್ಲಿ

ಹೊರಬಂದ ನನ್ನ ಆಗಮನದಲ್ಲಿ  ನಿಮ್ಮಿಬ್ಬರ ನಗುವಲ್ಲಿ ನಾ ಕಂಡೆ ನನ್ನ ಪರಪಂಚವ...

 

ನನ್ನ ಆಗಮನದನಂತರ ನಾವು ಕಳೆದ ನನ್ನ  ಮೊದಲವರ್ಷದ ಹುಟ್ಟಿದ ಹಬ್ಬದಲ್ಲಿ

ನೀ ಕೊಟ್ಟ ಚುಂಬನವೇ ಉಡುಗೊರೆಯ ರೂಪ ಎಂದು ಭಾವಿಸಿದಾಗ ನಾ ಕಂಡೆ ನನ್ನ ಪರಪಂಚವ...

 

ಲಾಲನೆ ಪಾಲನೆಯಲ್ಲಿ ಬೆಳೆದು ತಿಳಿಸಂಜೆಯ ಹೊತ್ತಲ್ಲಿ ಮೂಡಿಬರುತ್ತಿದ್ದ ರಾಮಾಯಣ,ಮಾಹಾಭಾರತ

ಪುರಾಣ ಕಥೆಗಳ ಲಹರಿಯಲ್ಲಿ ಕಳೆದ ಬಾಲ್ಯದ   ಕ್ಷಣಗಳಲ್ಲೇ ನಾ ಕಂಡೆ ನನ್ನ ಪರಪಂಚವ...

 

ರಾತ್ರಿಯ ಹೊತ್ತಲ್ಲಿ ಚಂದಮಾಮನ ಜೊತೆಗೆ ಅಮ್ಮ ಹಾಕುತ್ತಿದ್ದ ಕೈತುತ್ತಿನಲ್ಲಿ 

ಒಂದಿಷ್ಟ್ ಆದರೂ ಕೇಳಲಿ ಎಂದು ಬಡಬಡಿಸುತ್ತಿದ್ದ ಅದೆಷ್ಟೋ ಕಿವಿಮಾತಿನ ಚಾಟಿಯಲ್ಲಿ ನಾ  ಕಂಡೆ ನನ್ನ ಪರಪಂಚವ...

 

ಮಾಗಿದ ಚಳಿಯಲ್ಲಿ ಚುಮು ಚುಮು ಕೊರೆಯುವ ಹೊತ್ತಲ್ಲಿ ಮೈನವಿರೇಳಿಸುವ ಕಷಾಯದ ಗುಂಗಲ್ಲಿ

ಒಲೆಯ ಕಾವನ್ನ ಸವೆಯುತ್ತ ನಾ ಕಳೆದ ಬಾಲ್ಯವ ಮತ್ತೆ  ಮೆಲುಕುಹಾಕುತ್ತ ನಾ ಕಂಡೆ ಮತ್ತೊಮ್ಮೆ ನನ್ನ ಪರಪಂಚವ...

 

ತುಟಿಯ ತೆರೆಯದೆಯು ಆಡಿದ ಸಾವಿರಾರು ಪದಗಳಲ್ಲಿ ಎಲ್ಲರ ಜೊತೆಯಲ್ಲೂ ಕಳೆದ ಸುಮಧುರ  ಕ್ಷಣಗಳಲ್ಲಿ

ಆಟ, ಪಾಠ, ನೋಟ, ಎಲ್ಲವನ್ನು ಎಲ್ಲರನ್ನು ತನ್ನದೇ ರೀತಿಯಲ್ಲಿ ತನಗೆ ಮುದ ನೀಡುವ ಹಾಗೆ  

ಭಾವಿಸಿಕೊಂಡ ಬದುಕಿನತ್ತ ಹೊಮ್ಮೆ ಹೊರಳಿದಾಗ ನಾ  ಕಂಡೆ ಮತ್ತೆ ನನ್ನ ಪರಪಂಚವ...

 

ಕಾಲನ ಕೈಗೆ ಸಿಕ್ಕಿ ಬದುಕಿನ ಭವಣೆಗಳಲ್ಲಿ ಮಿಂದು ಭಾವಸಾಗರದಲ್ಲಿ ಮುಳುಗಿ, ತೇಲಿ, ಹೊರಳಿ

ಬದುಕನ್ನ ಪಕ್ಕಕ್ಕಿಟ್ಟು ಮತ್ ಅದೇ ಬಾಲ್ಯದ  ನೆನಪಿನ ಹೊನಲಿನಲ್ಲಿ ನನ್ನನ್ನ  ನಾ ಕಂಡಾಗ ಅರಿತೆ ನನ್ನ ಪರಪಂಚವ...

ಪುಟ್ಟ ಎಂದು ಭ್ರಮಿಸಿದ ದೊಡ್ಡ ಬಣ್ಣದ ಪರಪಂಚವ......

 

ವಿಭಾ  ಸಿ ಎಸ್

ದ್ವಿತೀಯ ಬಿ ಎ ವಿಧ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 


Comments

Popular Posts