ನಾನೀಗ ಬಂಧಿ:
ಜೀವನದಲ್ಲಿ ಕತ್ತಲು ಕವಿದಂತೆ ಭಾಸವಾಗುತ್ತಿದೆ. ನಮ್ಮ
ಗಡಿಬಿಡಿ ಜೀವನಕ್ಕೆ ಉದ್ದನೆಯ ಪೂರ್ಣವಿರಾಮ, ಗಾಡಿ ಹಾರನ್ ಸಪ್ಪಳ ವಿಲ್ಲ, ಜನರ ಮಾತಿಲ್ಲ ದೇವಸ್ಥಾನಗಳಲ್ಲಿ ಗಂಟೆಯ ನಿನಾದ ವಿಲ್ಲ, ಎಲ್ಲವೂ ಶೂನ್ಯದ ರೀತಿ
ಯಂತ್ರದಂತೆ ಓಡುವ ನನ್ನ ಕಾಲುಗಳಿಗೆ ಉದ್ದನೆಯ ವಿರಾಮ, ಟಿವಿ
ಹಚ್ಚಿದ ಕ್ಷಣ ಕಣ್ಣು ಮುಂದೆ ಬರುವುದು ಮಹಾಮಾರಿಯ ರೌದ್ರಾವತಾರ ಗಳ ಸುದ್ದಿಗಳು. ರಸ್ತೆ
ಉದ್ದಕ್ಕೂ ನಿಶಬ್ದತೆಯ ಮೌನ, ಮನೆಯಿಂದ ಹೊರ ಕಾಲಿಡಲು ಭಯ, ಮನದಲ್ಲಿ ಒಂಟಿತನ ಆವರಿಸಿದೆ. ಜೀವನದಲ್ಲಿ ಕಾರ್ಮೋಡ ಕವಿ ದಂತೆ
ಭಾಸವಾಗುತ್ತಿದೆ, ಮನಸ್ಸು ಯಾವುದೋ ಯೋಜನೆಯತ್ತ ತನ್ನನ್ನು ಸೆಳೆಯುತ್ತಿದೆ, ಮೊಬೈಲ್ ಎತ್ತಿ ಮಾತನಾಡುವ ಮೊದಲು ಎಚ್ಚರಿಕೆಯ ಒಂದು ಧ್ವನಿ ನೆನಪಿಸುವುದು ನನಗೆ ಮತ್ತೆ ಆ ಮಹಾಮಾರಿಯನ್ನು, ಬೇಕಾದ
ವಸ್ತು ಲಭ್ಯವಿಲ್ಲ ಬೇಕಾದ ಕಡೆ ಹಾರಲಾಗುತ್ತಿಲ್ಲ ಏನನ್ನಾದರೂ
ಸ್ಪರ್ಶಿಸುವಾಗ ಭಯ ಆಪ್ತರೊಡನೆ ಆತ್ಮೀಯವಾಗಿ ಸಂಭಾಷಣೆ ಮಾಡಲಾಗುತ್ತಿಲ್ಲ, ಮುಖಾಮುಖಿ ಮಾತನಾಡುವಾಗಲೂ ಭಯ ಆವರಿಸುತ್ತದೆ. ಎಲ್ಲವನ್ನೂ ಅಸ್ಪೃಶ್ಯತೆ ಎಡೆಗೆ ದೂಡಿದೆ ಮನುಷ್ಯನ ಅಟ್ಟಹಾಸ,
ಅಭಿವೃದ್ಧಿ, ಕ್ರೌರ್ಯ, ನಾಶವನ್ನು
ಪ್ರಕೃತಿ ಎಷ್ಟು ದಿನ ಸಹಿಸುವುದು? ಎಲ್ಲವನ್ನು ಎಲ್ಲರನ್ನು ಒಂದೆಡೆ ಬಂಧಿಯಾಗಿಸಿದೆ.
ಜೀವನವನ್ನು ಸರಪಳಿಯ ಹಿಂದಿನಿಂದ ನೋಡುವಂತಹ ಪರಿಸ್ಥಿತಿ
ಕಗ್ಗತ್ತಲಿನ ಕತ್ತಲಲ್ಲಿ ನಾನೊಬ್ಬಳು ಏಕಾಂಗಿ ಬಣ್ಣದ ಬದುಕನ್ನು ಕತ್ತಲಾಗಿ ಸಿದ್ದು ಈ ನನ್ನ
ಮೌನ, ಕನಸಿನ ಕಡಲು ಕಂಬನಿಯಾಗಿ ಹರಿಯುತ್ತಿದೆ ನನ್ನನ್ನು ನಾನೇ ಮರೆತಂತಿದೆ.
ಈ ನಿಶಬ್ದತೆಯ ಬೇಜಾರಿನ ನಡುವೆ ಗೆಳತಿಯ ಕರೆ ಎತ್ತಿ
ಸಂತಸದಿಂದ ಕುಶಲೋಪರಿ ವಿಚಾರಿಸುತ್ತಾ ನನ್ನದೊಂದು ಬೇಜಾರಿನ ಜೀವನವಾಗಿದೆ ಎತ್ತ ಹೋಗಲಿ ಏನು
ಮಾಡಲಿ ಎಂದು ತಿಳಿಯದ ದ್ವಂದ್ವದ ಮನಸ್ಥಿತಿಯ ನಡುವೆ ಗೆಳತಿ ಹೇಳಿದ “ಆತ್ಮದೊಂದಿಗೆ ಆಟ”
ನನ್ನನ್ನು ಬರಸೆಳೆಯಿತು ನಿಧಾನವಾಗಿ ಪುಸ್ತಕ
ನನ್ನ ಕೈ ತುಂಬಿ ಕಣ್ಣಿನಲ್ಲಿ ಅಕ್ಷರದ ಬಿಂಬ ಕಾಣತೊಡಗಿತು ಪುಟ ತಿರುಗಿತು ಉತ್ಸಾಹ
ಹೆಚ್ಚಿತು. ಪುಸ್ತಕದೊಂದಿಗೆ ಭಾವನೆಗಳು ಬದಲಾಗತೊಡಗಿತು ಪುಸ್ತಕ ಮನಸ್ಸಿನ ಬಿಂಬವಾಗಿ ತೊಡಗಿತು,
ಹಗಲು-ರಾತ್ರಿಗಳು ಮರೆತು ಹೋದಂತೆ ಭಾಸವಾಯಿತು ಕುಟುಂಬ ನನ್ನವರ ನೆನಪು
ಆಗುತ್ತಿಲ್ಲ ಮನಸ್ಸು ಏನನ್ನೋ ಹುಡುಕುತ್ತಾ ಹೊರಟಿದೆ ಅದೇನೆಂದು ನಾನು ತಿಳಿಯಲಾರೆ.
ಪುಸ್ತಕದ ಪುಟ ತಿರುವುತ್ತಾ ಪುಸ್ತಕದಲ್ಲಿದ್ದ ಆತ್ಮ
ನನ್ನ ಆತ್ಮ ವಾಯಿತು ಹಗಲು-ರಾತ್ರಿ ಮರೆತು ಹೋದವು, ಆತ್ಮ
ನನ್ನ ಕಾಡತೊಡಗಿತು ವಾಸ್ತವದ ಜೀವನವನ್ನು ಮರೆಸಿತು. ಮನಸ್ಸನ್ನು ಎತ್ತಕಡೆಯೋ ಜಗ್ಗಿ ಕೊಂಡು
ಹೋಯಿತು. ಆತ್ಮವನ್ನುಶಾಶ್ವತವಾಗಿ ಕಾಣದಂತೆ ಮಾಡಲು ಹೊರಟೆ, ಆದರೆ ಅದು ನನ್ನ ಮನಸ್ಸಿನ ತುಂಬೆಲ್ಲಾ ಆವರಿಸಿತ್ತು.
ಆತ್ಮದ ಜೊತೆಗಿನ ಆಟದಲ್ಲಿ ನಾನು ಮುಳುಗಿದ್ದೆ ಆದರೆ ಅದು ನನ್ನ ಮನಸ್ಸಿನ ಜೊತೆಗೆ ಆಡಿದ ಆಟ
ವೆಂದು ನನಗೆ ತಿಳಿಯಲಿಲ್ಲ ಆ ಆಟವು ನನ್ನನ್ನು
ಶಾಶ್ವತವಾಗಿ ಹೊರಬರಲಾಗದ ಬಂಧಿಖಾನೆಯಲ್ಲಿ
ನನ್ನನ್ನು ಬಂದಿಯಾಗಿಸಿತು. ಜೀವನದಲ್ಲಿ ಬಂಧನವು ಸಹಜ ಆದರೆ ಆ ಬಂಧನವು ಆಶಾದಾಯಕವಾಗಿರಲಿ
ಆದರೆ ಬಂಧನ ನಮ್ಮನ್ನು ಶಾಶ್ವತವಾಗಿ ಹೊರಬರಲಾಗದ ಬಂಧೀಖಾನೆಯಲ್ಲಿ ಬಂದಿಸದಿರಲಿ.
ಪ್ರಣಮ್ಯ ಮಂಗಳೂರು..
ಪತ್ರಿಕೋದ್ಯಮ ವಿದ್ಯಾರ್ಥಿನಿ.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Comments
Post a Comment