Posts

ನೀನಾಸಮ್ ಒಂದು ಬೇರೆಯೇ ಲೋಕ

Image
  ಮೊದಲ ದಿನ ನೀನಾಸಮ್ ಗೆ ಕಾಲಿಟ್ಟ ತಕ್ಷಣ ಮಳೆಯ ಹನಿಗಳ ಸ್ವಾಗತ ಕಂಡರಿಯದ ಸ್ವರ್ಗಕೇ ದಾರಿ ತೋರುವಂತಿತ್ತು .... ಸುತ್ತಲು ಸಂಗೀತ ಮತ್ತು ನಾಟಕಗಳ ತಯಾರಿ ಕಣ್ಣ ಮಿನುಗಿಸಿ ನೋಡುವಂತೆ ಮಾಡಿತು ... ಮೊದಲ ದಿನದ ಮೊದಲನೇ   ಪರಿಚಯ ಗೋಷ್ಠಿಯ ಪ್ರಾರಂಭದ " ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ " ಹಾಡೇ ಎಲ್ಲರ ಕರ್ಣಗಳ ಅರಳಿಸಿತು ಈ ಗೋಷ್ಠಿಯು ಅದ್ಭುತದ ಜೊತೆಗೆ ಆಶ್ಚರ್ಯವನ್ನು ನೀಡಿತ್ತು .. ಏಕೆಂದರೆ ಹೆಸರಾಂತ ಬರಹಗಾರರು , ವಿಮರ್ಶಕರು ,   ಡಾಕ್ಟರು , ಶಿಕ್ಷಕರು , ನಿರ್ದೇಶಕರು ಹಾಗೂ ಕಲಾವಿದರು ಇನ್ನೂ ಅನೇಕ ವಿದ್ಯಾವಂತರು , ಜ್ಞಾನಿಗಳು ಕೂಡ ಈ ಶಿಬಿರದಲ್ಲಿದ್ದರು .. ನಾವು ಮಾತ್ರ ಏನು ಅರಿಯದ ಡಿಗ್ರಿ ಎಂಬ ಬಲೆಗೆ ಸಿಲುಕಿ ಲೋಕಜ್ಞಾನದ ಸಣ್ಣ ಪರಿಚಯವಿಟ್ಟುಕೊಂಡು ಅಲ್ಲಿಗೆ ಹೋದವರು .. ದಶಾನನ ಸ್ವಪ್ನಸಿದ್ಧಿ ಕಿರುನಾಟಕ ಅಂತೂ ಪದಗಳಲಿ ವರ್ಣಿಸಲಾಗದ ಅನುಭವ ‌, ಒಬ್ಬಳೇ ಹುಡುಗಿ ೫ - ೬ ಪಾತ್ರಗಳನ್ನು ಅಷ್ಟು ಕಡಿಮೆ ಸಮಯದಲ್ಲಿ ನಿಭಾಯಿಸಿದ್ದು ನಿಜಕ್ಕೂ ಅಚ್ಛರಿಯ ವಿಷಯ !! ಹೀಗೆ ಒಂದೊಂದು ಗೋಷ್ಠಿಗಳು ಒಂದೊಂದು ಲೋಕಕೇ ಕರೆದೊಯ್ಯುವ ದಾರಿಯಂತಿದ್ದವು . ನನ್ನ ಗುರುಗಳಾದ ಡಾ ‌. ರಾಜೇಂದ್ರ ಚೆನ್ನಿ ಸರ್ ಅವರ ಗೋಷ್ಠಿಯಂತು ಮೂಡನಂಬಿಕೆಗಳ ಮೇಲೆ ಹೆಣ್ಣಿನ ಧನಿಯ ತೆರೆಯಲಾರದ ಪರದೆ ಸರಿಸಿದಂತ...