Posts

"ಅಂತರಪಟದಾಚೆ ವಿಧಿ ತಂದ ವರ ನೀನು!"

Image
  ಆಕೆ ಕೂಡು ಕುಟುಂಬದಲ್ಲಿ 3 ನೇಯವಳಾಗಿ ಜನಿಸಿದವಳು . ಅಲ್ಲಿ ಕೂಡ ಬಡತನವೇ ಸೈ !, ಅದು ಹೆಣ್ಣು " ಭಾರ " ಎನ್ನುವಂತ ಕಾಲ . ಒಂದೇ ಜೊತೆ ಬಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಬದಲಾಯಿಸಿ ಮತ್ತೊಮ್ಮೆ ಧರಿಸುವಂತ ಸಂದರ್ಭ , ಆದರೂ ಹೆಸರಿಗೆ ದೊಡ್ದ ಮನೆತನವದು . ಆ ಕುಟುಂಬದಲ್ಲಿ ನಾಲ್ವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳು . ಒಂದು ಬಡ ಕುಟುಂಬದಲ್ಲಿ ಅವರ ಜೀವನ ಗುರಿಯೇ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳುವುದು , ಮನೆ ನಡಿಸುವುದು ಎಷ್ಟೇ ಕಷ್ಟವಾಗಿಯೇ ಇದ್ದರೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ಎಂಬಂತ ಕಾಲ , ಹಾಗೋ ಹೀಗೋ ಆಕೆಗೆ ಮದುವೆಯನ್ನಮಾಡಿದರು . ಕಾಲಿಟ್ಟ ಮನೆಯಲ್ಲಿ ಕೂಡಾ ಅಷ್ಟೇ ತುಂಬು ಕುಟುಂಬ , ಬಡತನದ ಛಾಪು ಹೇರಳವಾಗೇ ಇತ್ತು !. ಹೇಗೊ ಇನ್ನು " ಅಂತರಪಟದಾಚೆ ನಿಂತ ನಲ್ಲನೇ ಜೀವನದ ಅರ್ಥ ", ಆತ ಕಪ್ಪಾಗಿರಲಿ , ಕಳ್ಳನಾಗಿರಲಿ , ಕುಬ್ಜನೇ ಆಗಿರಲಿ , ಮೃಗವೇ ಆಗಿರಲಿ ಆತನೇ ತನ್ನ ತನು ಮನದ ಅರ್ಧಾಂಗ ಎನ್ನುವುದನ್ನ ದೃಢವಾಗಿ ನಂಬಿದ್ದಳಾಕೆ . ಪ್ರತೀ ಹೆಣ್ಣಿಗೂ ಗಂಡನೊಂದಿಗೆ ಬೆಸೆದ ಬಾಂಧವ್ಯ ಎಷ್ಟೊಂದು ಅವಿನಾಭಾವವೆಂದರೆ !, ಆತನಾದರೂ ಆಕೆ ಸತ್ತರೆ ಇನ್ನೊಬ್ಬಳನ್ನ ಆರಾಮಾಗಿ ವರಿಸಬಲ್ಲ ಆದರೆ ಆಕೆಗೆ ಅದು ಸೂಜಿಗಳನ್ನು ನುಂ...