Posts

Showing posts from September, 2024

ಪ್ರೀತಿಯ ತೋರಣ

Image
    ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ , ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ , ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ ,   ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ .   ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ , ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ , ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ , ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ .   ಪ್ರೀತಿ ಮಳೆಯ ಲಯವಾಗಲಿ , ಶಮನಗೊಳಿಸುವುದು ನಮ್ಮಯ ನೋವನು ಆಳದಲಿ , ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ , ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ .   ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ ತಾಳ್ಮೆ , ದಯೆ ಮತ್ತು ಅಂತ್ಯವು ನೀನಾಗಿರಲಿ , ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ .   ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ , ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ , ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ , ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ ......!    ಮಂಜುನಾಥ್.   ಎಸ್ ಸಹಾಯಕ ಪ್ರಾಧ್ಯಾಪಕರು , ಮನೋವಿಜ...

ಸ್ವಾಭಿಮಾನದ ಸಾಧ್ವಿಗೆ ‘ಘನತೆ'ಯೆಂಬ ಗದ್ದುಗೆ!

Image
ಮನುಷ್ಯ ಜಗತ್ತಿಗೆ ಸ್ವಾವಲಂಬನೆಯೆಂಬ ಹಂದರವನ್ನು ಇಳೆಯ ಮೇಲೆ ಹಾಕಿರುವವಳೇ ಮಹಿಳೆ. ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ದಿಟ್ಟ ಹೆಜ್ಜೆಯಲ್ಲಿ ನಡೆಯುವವಳು ಎಂದರ್ಥ. ವ್ಯಂಜನಕ್ಕೆ ಸ್ವರವು ಆಧಾರವಾಗುವಂತೆ ಅವಳ ಅಸ್ತಿತ್ವ ರೂಪಿಸಿಕೊಳ್ಳಲು ‘ಸ್ವಾವಲಂಬನೆ’ ಎಂಬ ಖಡ್ಗವನ್ನು ಹಿಡಿದವಳು ಮಹಿಳೆ. ಸಿಕ್ಕಿ ರೋವ್ ರವರು “ಮಹಿಳೆಯಾದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯಾಗಬೇಕು, ಆಗ ಗಂಡಿಗೆ ಹೋರಾಡಲು ಒಂದು ಯೋಗ್ಯವಾದ ಕಾರಣ ಸಿಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಪುರುಷ ‘ಶಕ್ತಿ’ಯೇ ಮೇಲೆಂದು ಬೀಗುತ್ತಿದ್ದ ಇಂತಹ ಜಗತ್ತಿಗೆ ಸ್ತ್ರೀ ‘ಶಕ್ತಿ’ ಏನೆಂದು ತೋರಿಸಿಕೊಟ್ಟದ್ದು ‘ಶಕ್ತಿ’ ಯೋಜನೆಯು ಜಾರಿಯಾದಂತಹ ಈ ವರ್ಷ. ಈ ಯೋಜನೆಯಲ್ಲಿ ‘ಶಕ್ತಿ’ಯ ಪ್ರದರ್ಶನವೇನೋ ಆಯಿತು ಎಂದು ನಾವು ದೂರದರ್ಶನ, ಸುದ್ದಿಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ, ಆದರೆ ‘ಶಕ್ತಿ’ಯಲ್ಲಿ ಪ್ರದರ್ಶನಗೊಂಡ ಮಹಿಳಾ ಶಕ್ತಿಯು ಶಾಶ್ವತವೋ ಅಥವಾ ತಾತ್ಕಾಲಿಕವೋ ನಾನರಿಯೇ..!!  ಜಾಗತಿಕವಾಗಿ 3.905 ದಶಕೋಟಿಗಳಷ್ಟು ಮಹಿಳಾ ಜನಸಂಖ್ಯೆ ಇದ್ದು, ಡಬ್ಲ್ಯೂ. ಈ.ಐ.ಯ ವರದಿಯ ಪ್ರಕಾರ 60 ಪ್ರತಿಶತದಷ್ಟು ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ, ಅಂದರೆ ಪ್ರಮುಖ ಮಾನವ ಅಭಿವೃದ್ಧಿ ಆಯಾಮಗಳಲ್ಲಿ ಪುರುಷರು ಸಾಧಿಸುವ ಸರಾಸರಿ 72ರಷ್ಟು ಪ್ರತಿಶತವನ್ನು ಅವರು ಸಾಧಿಸಿದ್ದಾರೆ. ಇದನ್ನು...